HomeSPORTS WORLDಐಪಿಎಲ್‌ ಹರಾಜು ಫೆ 12ಕ್ಕೆ

ಐಪಿಎಲ್‌ ಹರಾಜು ಫೆ 12ಕ್ಕೆ

National:ದೆಹಲಿ: ಐಪಿಎಲ್‌ 2014ನೇ ಸಾಲಿನ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 12ರಂದು ನಡೆಯಲಿದ್ದು, ಪ್ರತಿ ಫ್ರಾಂಚೈಸಿಗಳು ಈ ಭಾರಿ  5 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಈ ಬಾರಿ ನಿರ್ದಿಷ್ಟ ಆಟಗಾರರನ್ನು ಮರಳಿ ಖರೀದಿಸುವ 'ರೈಟ್‌ ಟು ಮ್ಯಾಚ್‌' ನಿಯಮ ಪರಿಚಯಿಸಲಾಗುತ್ತಿದೆ.

ಮಂಗಳವಾರ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಆಟಗಾರರ ಗುತ್ತಿಗೆ, ತಂಡದ ಸಂಯೋಜನೆ ಹಾಗೂ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವುದು ಸೇರಿದಂತೆ ಹಲವಾರು ಹೊಸ ನಿಯಮಗಳನ್ನು ಈ ಭಾರಿ ಪರಿಚಯಿಸಲು ಚಿಂತಿಸಲಾಗಿದೆ.

ಈ ಭಾರಿ ಫ್ರಾಂಚೈಸಿಗಳು ಗರಿಷ್ಠ 5 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅದರಲ್ಲಿ 2013ರ ತಂಡದಲ್ಲಿದ್ದ ಹಾಗೂ ರಾಷ್ಟ್ರೀಯ ತಂಡ ಪ್ರತಿನಿಧಿಸಿದ ಮತ್ತು ಪ್ರತಿನಿಧಿಸದ ಆಟಗಾರರು ಇರಬಹುದಾಗಿದೆ. ಇದರಲ್ಲಿ ರಾಷ್ಟ್ರೀಯ ತಂಡದ ಆಟಗಾರರ ಸಂಖ್ಯೆ 4ಕ್ಕಿಂತ ಹೆಚ್ಚಿರಬಾರದು.

ನಾಲ್ಕು ಆಟಗಾರರಿಗೆ ಪ್ರಾಶಸ್ತ್ಯದ ಪ್ರಕಾರ ತಲಾ 12.5 ಕೋಟಿ ರೂ. 9.5 ಕೋಟಿ ರೂ., 7.5, 5.5 ಮತ್ತು 4 ಕೋಟಿ ರೂ. ನೀಡಬೇಕಾಗಿದೆ. ಹರಾಜಿಗೂ ಮುನ್ನ ಉಳಿಸಿಕೊಂಡ ಆಟಗಾರರು ಹೊರತುಪಡಿಸಿ ಉಳಿದ ಎಲ್ಲ ಆಟಗಾರರು 2014ನೇ ಸಾಲಿನ ಹರಾಜಿಗೆ ಒಳಪಡಲಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರತಿ ತಂಡಗಳು 9 ವಿದೇಶೀ ಆಟಗಾರರನ್ನು ಒಳಗೊಂಡಂತೆ 16ಕ್ಕಿಂತ ಕಡಿಮೆ ಇಲ್ಲದೆ ಹಾಗೂ 27ಕ್ಕಿಂತ ಹೆಚ್ಚಿಲ್ಲದೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

2014ರ ಐಪಿಎಲ್‌ 7ನೇ ಆವತರಣಿಕೆಯಲ್ಲಿ ಪ್ರತಿ ತಂಡಗಳು 60 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚ ಮಾಡುವಂತಿಲ್ಲ ಎಂದು ಐಪಿಎಲ್‌ ಆಡಳಿತ ಮಂಡಳಿ ವಿವರಿಸಿದೆ.

2015 ಮತ್ತು 2016ರ ಅವಧಿಗೆ ವೇತನದಲ್ಲಿ ಶೇ.5ರಷ್ಟು ಏರಿಕೆಯಾಗಲಿದೆ. ಆಟಗಾರರು ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳುವುದರ ಜತೆಗೆ ಹೆಚ್ಚುವರಿಯಾಗಿ ಒಂದು ಮತ್ತು ಎರಡು ವರ್ಷಗಳಿಗೆ ಒಪ್ಪಂದವನ್ನು ವಿಸ್ತರಿಸಬಹುದಾಗಿದೆ. ಪ್ರತಿ ವರ್ಷ ಆಟಗಾರನನ್ನು ತನ್ನ ಒಪ್ಪಂದವನ್ನು ಡಿ.15ರೊಳಗೆ ಬಳಕೆಗೆ ತರುವುದು ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *

 
No one has commented yet.

     

Advertisement

Advertisement

Advertisement

Advertisement